ರಾಯಚೂರು ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಸುಧಾರಿಸುವುದು ಅವಶ್ಯಕತೆ ಇದೆ. ಇನ್ನೂ ರಾಯಚೂರಿನಿಂದ ಸಗಮಕುಂಟಕ್ಕೆ ಹೋಗುವವರಿಗೆ ರಸ್ತೆ ಸಂಪೂರ್ಣ ಹಾಳಾಗಿದ್ದು ದ್ವಿಚಕ್ರ ವಾಹನ ಸವಾರರು ಓಡಾಡುವುದು ದುಸ್ಥರವಾಗಿದೆ. ಇನ್ನು ದೊಡ್ಡ ವಾಹನಗಳು ಓಡಾಡುವುದರಿಂದ ಈ ಒಂದು ರಸ್ತೆ ಸಂಪೂರ್ಣ ಹಾಳಾಗಿದೆ ಎಂಬುದು ಗ್ರಾಮಸ್ಥರ ಮಾತಾಗಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಲು ಮನವಿ ಸಲ್ಲಿಸಲಾಗಿದೆ.