ರಾಯಚೂರು: ಮಂತ್ರಾಲಯ ಮಠ 34 ದಿನಕ್ಕೆ ದಾಖಲೆ 5 ಕೋಟಿ 41 ಲಕ್ಷ ಕಾಣಿಕೆ ಸಂಗ್ರಹ
ರಾಯಚೂರು ಬಳಿಯ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ತಿಂಗಳಿನಂತೆ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು. ನವಂಬರಗ ತಿಂಗಳ 34 ದಿನದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ದಾಖಲೆ 5 ಕೋಟಿ, 41ಲಕ್ಷ ,47ಸಾವಿರದ ,228 ರೂಪಾಯಿ ಹಣ ಸಂಗ್ರಹವಾಗಿದೆ. ಇನ್ನೂ 80 ಗ್ರಾಂ ಬಂಗಾರ, 1610 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.