ಭದ್ರಾವತಿ: ನವಿಲೇ ಬಸಾಪುರ ಗ್ರಾಮದಲ್ಲಿ ಶ್ರೀ ನವಿಲೇ ಬಸವೇಶ್ವರ ಸ್ವಾಮಿಯ ರಥೋತ್ಸವ, ಸಾವಿರಾರು ಭಕ್ತರು ಭಾಗಿ
ಭದ್ರಾವತಿ ತಾಲ್ಲೂಕಿನ ನವಿಲೇ ಬಸಾಪುರ ಗ್ರಾಮದಲ್ಲಿ ಶ್ರೀ ನವಿಲೇ ಬಸವೇಶ್ವರ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ಶನಿವಾರದಂದು ಗ್ರಾಮದ ಮುಖ್ಯರಸ್ತೆಯಲ್ಲಿ ರಥೋತ್ಸವದ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.