ನಿಮ ಐದು ಗ್ಯಾರೆಂಟಿಗಳ ಜೊತೆಗೆ, ನಾಡಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಹಿತಕ್ಕಾಗಿ ಅವರ ಭವ್ಯ ಬದುಕಿಗೆ ಬೆಳಕಾಗುವಂತೆ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ವಿದ್ಯಾರ್ಥಿಗಳಿಗೆ ನಿಮ್ಮ ಭರವಸೆಯ ಮತ್ತೊಂದು ಗ್ಯಾರೆಂಟಿಯ ಅಗತ್ಯವಿದೆ ಎಂದು ಮಾಜಿ ಸಚಿವರಾದ ಕೆ ಶಿವನಗೌಡ ನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಮಂಗಳವಾರ 11 ಗಂಟೆಗೆ ಬರೆದ ಪತ್ರದಲ್ಲಿ ಬಿಸಿಎಂ ವಸತಿನಿಲಯಗಳ ಅರ್ಜಿ ಹಾಗೂ ಸೀಟುಗಳ ಕೊರತೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟದ ವಿಷಯವು ಮಾಧ್ಯಮಗಳ ಮೂಲಕ ತಮಗೆ ತಿಳಿದು ಬಂದಿದೆ ಎಂದಿದ್ದಾರೆ.