ಬಾದಾಮಿ: ಕಾಕನೂರು ಗ್ರಾಮದಲ್ಲಿ ಶ್ರದ್ಧಾ ಭಕ್ತಿಗಳಿಂದ ಜರುಗಿದ ಶ್ರೀ ಕಾಳಿಕಾ ದೇವಿ,ಸತತ ಹತ್ತು ಗಂಟೆಗಳ ಕಾಲ ಆರತಿ ಬೆಳಗಿ ಭಕ್ತಿ ಸಪರ್ಪಣೆ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ಶ್ರದ್ದಾಭಕ್ತಿಗಳಿಂದ ಜರುಗಿತು.ಪ್ರತೀ ವರ್ಷದಂತೆ ಈ ವರ್ಷದ ಕಾರ್ತಿಕ ಮಾಸದ ಪೂಜೆ ಕೈಂಕರ್ಯಗಳು ಆರಂಭಗೊಂಡಿದ್ದು,ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನಜ ನೆರವೇರಿಸಲಾಯಿತು. ದೇವಿಯ ಪೂಜಾ ಕೈಂಕರ್ಯ ನೆರವೇರಿಸುವ ಶಿವರಾಜ ಪೂಜಾರ್ ಅವರು ಸತತವಾಗಿ ಹತ್ತು ಗಂಟೆಗಳ ಕಾಲ ದೇವಿಗೆ ಆರತಿ ಬೆಳಗಿ ಸೇವೆ ಸಲ್ಲಿಸಿದ್ದು ವಿಶೇಷವಾಗಿದೆ.ಜೊತೆಗೆ ಡೊಳ್ಳು ,ಹಲವೆ ವಾದನದವರು ಕೂಡ ಸಾಥ್ ನೀಡಿದ್ದಾರೆ.ರಾತ್ರಿ ಒಂಭತ್ತು ಗಂಟೆಯಿಂದ ಬೆಳಗಿನ ಏಳು ಗಂಟೆಯವರೆಗೆ ಆರತಿ ಡೊಳ್ಳು ಹಲಗೆ ಸೇವೆ ಜರುಗಿದೆ. ಇನ್ನು ಗ್ರಾಮದ ಜನರು ಸೇರಿದಂತೆ ಜಿಲ್ಲೆ ಹೊರ ಜಿಲ್ಲೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ್ರು