ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಆಧುನಿಕ ತಂತ್ರಜ್ಞಾನದೊಂದಿಗೆ ೧೦ ಎಕರೆ ಪ್ರದೇಶದಲ್ಲಿ ಮಾಧರಿ ಶಾಲೆಯನ್ನು ನಿರ್ಮಿಸಲಾಗುತ್ತದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ಬಂಗಾರಪೇಟೆ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನ ಬಳಿ ನೂತನ ಶಾಲಾ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು. ಸರ್ಕಾರಿ ಶಾಲೆಗಳು ಎಂದರೆ ನಿರುತ್ಸಾಹ ತೋರುವ ಜೊತೆಗೆ ಮೂಗು ಮುರಿಯುವಂತಹ ಕಾಲಘಟ್ಟದಲ್ಲಿ ಒಸಾಟ್ ಸಂಸ್ಥೆ ಸರ್ಕಾರಿ ಶಾಲೆಗಳ ಅಭಿವೃದ್ದಿ ಮಾಡಲು ಮುಂದಾಗಿರುವುದು ಶ್ಲಾಘನೀಯ. ನೂರು ವರ್ಷಗಳ ಇತಿಹಾಸ ಇರುವಂತಹ ಶಾಲೆಯನ್ನು ಅಭಿವೃದ್ದಿ ಮಾಡಬೇಕಾದ ಅನಿವಾರ್ಯವಿತ್ತು. ಬಂಗಾರಪೇಟೆಯಲ್ಲಿ ಹುಟ್ಟಿ ಬೆಳೆದು ಅಮೇರಿಕಾದಲ್ಲಿ ವೈಧ್ಯ ವೃತ್ತಿ ಮಾಡುತ್ತಿರುವ