ಚಿತ್ರದುರ್ಗ, ಸ್ಲಗ್: ಕಳ್ಳರ ಸುಳಿವು ಪತ್ತೆ. ಆ್ಯಂಕರ್: ಚಳ್ಳಕೆರೆ ನಗರದಲ್ಲಿ ಡಿಸೆಂಬರ್ 09ರಂದು ಕಿರಾಣಿ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದ ಕಳ್ಳರ ಭಾವಚಿತ್ರವನ್ನು ಚಳ್ಳಕೆರೆ ಪೊಲೀಸರು ಪತ್ತೆ ಮಾಡಿದ್ದಾರೆ. ಚಳ್ಳಕೆರೆ ನಗರದ ಹಳೇ ಟೌನ್ ತಿಮ್ಮಪ್ಪ ದೆವಸ್ಥಾನದ ಕೊನೆಯ ಬಿದಿಯಲ್ಲಿನ ಕಿರಾಣಿ ಅಂಗಡಿಗೆ ಬಂದಿದ್ದ ಖದೀಮರು 65 ಗ್ರಾಂ ತೂಕದ ಸುಮಾರು 7 ಲಕ್ಷ ಮೌಲ್ಯದ ಚಿನ್ನದ ಸರ ಕದ್ದು, ರಸ್ತೆಯ ಕೊನೆಯಲ್ಲಿ ನಿಂತಿದ್ದ ಇನ್ನೋರ್ವ ಕಳ್ಳನೊಂದಿಗೆ ಬೈಕ್ ನಲ್ಲಿ ಪರಾರಿಯಾಗಿದ್ದರು.