ತೀರ್ಥಹಳ್ಳಿ: ನಾಡಗೀತೆ ನೂರರ ಸಂಭ್ರಮ:ತೀರ್ಥಹಳ್ಳಿಯಲ್ಲಿ ಸಂಭ್ರಮಾಚರಣೆ
ನಾಡಗೀತೆಗೆ ನೂರರ ಸಂಭ್ರಮದ ಹಿನ್ನೆಲೆ ರಾಷ್ಟ್ರಕವಿಯವರ ತವರೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಸಂಭ್ರಮಾಚರಣೆಯನ್ನ ಆಚರಿಸಲಾಯಿತು. ಶನಿವಾರ ಸಂಜೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಮತ್ತು ಶಾಲಾ ಶಿಕ್ಷಣ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ನಾಡಗೀತೆ ಹಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತೀರ್ಥಹಳ್ಳಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ನಾಡಗೀತೆಗೆ 100ರ ಸಂಭ್ರಮವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.