ಕೋಲಿ ಕಬ್ಬಲಿಗ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಸೋಮವಾರ 11 ಗಂಟೆಯಿಂದ ಆರಂಭಗೊಂಡ ಬೃಹತ್ ಪ್ರತಿಭಟನೆ ರಾತ್ರಿ 8-30 ಕ್ಕೆ ಸಿಎಂ ಹಾಗೂ ಉಸ್ತುವಾರಿ ಸಚಿವರಿಂದ ಸೂಕ್ತ ಕ್ರಮದ ಭರವಸೆ ಸಿಕ್ಕ ನಂತರ ಹೋರಾಟ ಮೊಟಕುಗೊಳಿಸಲಾಯಿತು ಎಂದು ಹೋರಾಟದ ರೂವಾರಿ ಶಿವಕುಮಾರ್ ನಾಟಿಕರ್ ತಿಳಿಸಿದರು. ಸರ್ಕಾರ ಮೇಲೆ ನಂಬಿಕೆ ಇಟ್ಟು ತಾತ್ಕಾಲಿಕವಾಗಿ ಹೋರಾಟ ಕೈಬಿಡಲಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸುವದಾಗಿ ನಾಟೀಕರ್ ಎಚ್ಚರಿಸಿದರು...