ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾರ್ತಿಕೇನಹಟ್ಟಿ ಗ್ರಾಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರಾತ್ರಿ ವೇಳೆ ಕುರಿ ಹಟ್ಟಿಯಲ್ಲಿದ್ದ 11 ಕುರಿಗಳನ್ನ ಕದ್ದು ಎಸ್ಕೇಪ್ ಆಗಿದ್ದು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ನಾಗರಾಜ್ ಎಂಬುವವರಿಗೆ ಸೇರಿದ 11 ಕುರಿಗಳನ್ನ ಕಳ್ಳತನ ಮಾಡಲಾಗಿದೆ. ಮಾಲೀಕರಾದ ನಾಗರಾಜ್ ರಾತ್ರಿ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ಹೊಂಚು ಹಾಕಿ ಕಳವು ಮಾಡಲಾಗಿದೆ. ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಜರುಗಿದೆ