ಕೋಲಾರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡಿರುವ ಭರವಸೆ ಈಡೇರಿಕೆಗೆ ನಗರದಲ್ಲಿ ಸಿಎಂಗೆ ಆಗ್ರಹ
Kolar, Kolar | Aug 13, 2025 ಮುಖ್ಯಮಂತ್ರಿಗಳು ಕಳೆದ 2024ರ ಶಿಕ್ಷಕರ ದಿನಾಚರಣೆಯಂದು ನೀಡಿದ ಭರವಸೆಯಂತೆ ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣ ಅನುಮೋದನೆ ನೀಡಲು ನಿರ್ದೇಶನ ನೀಡಲು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಶಾಖೆಯಿಂದ ಬುಧವಾರ ಸಂಜೆ 4: 30ರ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.