ಹುಮ್ನಾಬಾದ್: ನಗರದಲ್ಲಿ ಬಳಕೆ ಇಲ್ಲದೆ ಪಾಲುಬಿದ್ದ ನೀರಾವರಿ ಇಲಾಖೆ ವಸತಿಗೃಹ ಕಟ್ಟಡ ಸದ್ಬಳಕೆಗೆ ಸಾರ್ವಜನಿಕರ ಆಗ್ರಹ #localissue
Homnabad, Bidar | Nov 19, 2025 ನಗರದಲ್ಲಿ ಶಾಸಕರ ಕಛೇರಿ ಪಕ್ಕದಲ್ಲಿರುವ ನೀರಾವರಿ ಇಲಾಖೆಗೆ ಸಂಬಂಧಪಟ್ಟ ವಸತಿಗೃಹ ಬಳಕೆ ಇಲ್ಲದೆ ಕಳೆದ ಒಂದು ವರದ ಶಕದಿಂದ ಪಾಳು ಬಿದ್ದಿದೆ. ನೀರಾವರಿ ಇಲಾಖೆ ಸಂಬಂಧಪಟ್ಟ ಅಧಿಕಾರಿ ಕೆಲ ವರ್ಷ ಮಾತ್ರ ಆ ಕಟ್ಟಡದಲ್ಲಿ ಉಳಿದಿದ್ದರು. ಬಳಿಕ ಆ ಯೋಜನೆ ಪೂರ್ಣಗೊಂಡ ನಂತರ ಕಚೇರಿ ಬೇರೆ ಕಡೆ ಸ್ಥಳಾಂತರ ಆಯ್ತು. ಆಗ ಖಾಲಿ ಬಿದ್ದ ಕಟ್ಟಡವನ್ನು ದುರುಸ್ತಿ ಮಾಡಿಕೊಂಡು ಆಗಿನ ಎಂಎಲ್ಸಿ ಬಸವರಾಜ್ ಪಾಟೀಲ್ ಅವರು ತಮ್ಮ ಕಚೇರಿಯನ್ನಾಗಿ ಬಳಸಿಕೊಂಡಿದ್ದರು. ತದನಂತರ ಒಂದುವರೆ ದಶಕದಿಂದ ಈ ಕಟ್ಟಡ ನೋಡುವರು ದಿಕ್ಕಿಲ್ಲದೆ ಬಳಕೆ ಇಲ್ಲದೆ ಸಂಪೂರ್ಣ ಹಾಳಾಗ್ತಾ ಇದೆ ಕಾರಣ ಕಟ್ಟಡ ಸಂಪೂರ್ಣ ಹಾಳಾಗುವ ಮುನ್ನ ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.