ಶೋರಾಪುರ: ಲಕ್ಷ್ಮಿಪುರ ಗ್ರಾಮದ ಶ್ರೀ ಗಿರಿ ಮಹಾಸಂಸ್ಥಾನ ಮಠದಲ್ಲಿ ಬನ್ನಿ ಮಹಾಕಾಳಿಗೆ ಹುಡಿ ತುಂಬುವ ಕಾರ್ಯಕ್ರಮ ಜರಗಿತು
ಪ್ರತಿ ವರ್ಷದಂತೆ ಲೋಕ ಕಲ್ಯಾಣಾರ್ಥವಾಗಿ, ಧರ್ಮ ಜಾಗೃತಿಗಾಗಿ ಲಕ್ಷ್ಮೀಪುರ ಪ.ಬ್ರ.ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಇವರ 9 ದಿನಗಳ ಕಾಲ ಮೌನ ಅನುಷ್ಠಾನ ಪ್ರತಿ ದಿನ ಬೆಳಿಗ್ಗೆ 7 ಗಂಟೆ ಶ್ರೀ ಮಠದಲ್ಲಿ ಮಹಾ ಚಂಡಿ ಹೋಮ ಜರುಗುವುದು ಐದು ದಿನಗಳ ಸಾಗಿ ಬಂದ ಮಹಾ ಹೋಮ ಪೂರ್ಣಹವತಿ ನೀಡುವುದರ ಮೂಲಕ ಮಹಾ ಮಂಗಳಗೊಂಡು ಇಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಭ್ರಮರಾಂಬಿಕ ದೇವಿಗೆ ಉಡಿ ತುಂಬುವುದರ ಜೊತೆಗೆ ಬನ್ನಿ ಮಹಾಕಾಳಿಂಗೆ ಉಡಿ ತುಂಬುವುದರ ಜೊತೆಗೆ ಅನುಷ್ಠಾನ ಮಂಗಳಗೊಂಡಿದೆ ಈ ಸಂದರ್ಭದಲ್ಲಿ ಕೆವಾಯಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಡಾ.ಸುರೇಶ ಸಜ್ದನ ಸೇರಿದಂತ ಸಕಲ ಸದ್ದ ಭಕ್ತರು ಉಪಸ್ಥಿತರಿದ್ದರು