ಶೋರಾಪುರ: ತಿರುಪತಿ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ರಥೋತ್ಸವದಲ್ಲಿ ಸುರಪುರ ಸಂಸ್ಥಾನದ ಪ್ರತಿನಿಧಿ ಇಂದ ಪ್ರಥಮ ಪೂಜೆ ಜರುಗಿತು
ಸುರಪುರ ಸಂಸ್ಥಾನದ ರಾಜಪ್ರತಿನಿಧಿಯಿಂದ ಅಗ್ರ ಪೂಜೆ ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವದ ನಿಮಿತ್ತ ಬುಧವಾರ ಸುರಪುರ ಸಂಸ್ಥಾನದಿಂದ ಅಗ್ರ ಪೂಜೆ ನಡೆಯಿತು. ಪ್ರತಿ ವರ್ಷ ತಿರುಪತಿಯಲ್ಲಿ ಬ್ರಹ್ಮೋತ್ಸವದ ನಿಮಿತ್ತ ಜರುಗುವ ರಥೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಪ್ರಥಮ ಪೂಜೆ ಜರುಗಿದ ನಂತರವೇ ರಥೋತ್ಸವಕ್ಕೆ ಚಾಲನೆ ಸಿಗುತ್ತದೆ. ಇದು ಸುರಪುರ ಸಂಸ್ಥಾನದ ಅರಸರ ಕಾಲದಿಂದಲೂ ನಡೆದು ಬಂದ ಪರಂಪರೆಯಾಗಿದೆ. ಈ ವರ್ಷವೂ ಇಲ್ಲಿಯ ಸಂಸ್ಥಾನದ ಅಳಿಯ ಮತ್ತು ಪುರಸಭೆ ಪ್ರತಿ ಪಕ್ಷದ ನಾಯಕ ವೇಣುಮಾಧವ ನಾಯಕ ರಥೋತ್ಸವದಲ್ಲಿ ಸಂಸ್ಥಾನದ ರಾಜಪ್ರತಿನಿಧಿಯಾಗಿ ಭಾಗವಹಿಸಿದ್ದರು.