ಸಿರಗುಪ್ಪ: ತೆಕ್ಕಲಕೋಟೆಯಲ್ಲಿ ಮನೆ ಮನೆಯೂ ಸ್ವದೇಶಿ ಅಭಿಯಾನಕ್ಕೆ ಮಾಜಿ ಶಾಸಕ ಚಾಲನೆ
ಡಿ.9,ಮಂಗಳವಾರ ಬೆಳಿಗ್ಗೆ 11ಕ್ಕೆ, ಆತ್ಮ ನಿರ್ಭರ್ ಕಾರ್ಯಕ್ರಮದ ಅಂಗವಾಗಿ “ಪ್ರತಿ ಮನೆಯ ಸ್ವದೇಶಿ — ಮನೆಮನೆಯೂ ಸ್ವದೇಶಿ” ಅಭಿಯಾನಕ್ಕೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಚಾಲನೆ ನೀಡಲಾಯಿತು. ಮನೆಮನೆಗಳಿಗೆ ಸ್ವದೇಶಿ ಸ್ಟಿಕ್ಕರ್ಗಳನ್ನು ಅಂಟಿಸುವ ಮೂಲಕ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹಾಗೂ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕರು ಮಾತನಾಡಿ, “ಮಂಡಲದ ಪ್ರತಿಯೊಂದು ಬೂತ್ ಮಟ್ಟಕ್ಕೂ ತೆರಳಿ ಪ್ರತಿ ಮನೆಯನ್ನು ಸ್ವದೇಶೀಕತೆಯ ಹಾದಿಗೆ ಸೆಳೆಯುವ ಉದ್ದೇಶದಿಂದ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಬೇಕು,” ಎಂದು ಸೂಚಿಸಿದರು.