ಯಲ್ಲಾಪುರ: ಪಟ್ಟಣದಲ್ಲಿ ಜಿಲ್ಲಾ ಆಟೊ ರಿಕ್ಷಾ ಚಾಲಕ ಮಾಲೀಕರ ಸಂಘದಿಂದ ಶಾಸಕ ಶಿವರಾಮ ಹೆಬ್ಬಾರ ಹಾಗೂ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಜಿಲ್ಲೆಯಲ್ಲಿ ಸುಮಾರು 7 ಸಾವಿರ ಕ್ಕಿಂತ ಹೆಚ್ಚು ಆಟೋಗಳು ಇವೆ. 2 ಕ್ಕಿಂತ ಹೆಚ್ಚಿನ ಪರ್ಮಿಟ್ ಹೊಂದಿರುವ ಆಟೋ ರಿಕ್ಷಾ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು. ಕನಿಷ್ಠ 5 ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು. ಜಿಲ್ಲಾ ಕೇಂದ್ರದ ಸ್ಥಳದಲ್ಲಿಯೇ ಪರ್ಮಿಟ್ ನೀಡುವ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸಂಘದ ರಾಜ್ಯಾಧ್ಯಕ್ಷ ರಾಜಶೇಖರಯ್ಯ ಮಠಪತಿ,ತಾಲೂಕಾಧ್ಯಕ್ಷ ವಿಜಯ ಮಿರಾಶಿ ಇತರರು ಇದ್ದರು.