ಹೆಬ್ರಿ: ಪಟ್ಟಣದ ಸೀತಾ ನದಿಯಲ್ಲಿ : 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪತ್ತೆ
Hebri, Udupi | Apr 2, 2024 ಹೆಬ್ರಿ ತಾಲೂಕಿನ ಸೀತಾನದಿಯ ಕೃಷಿಕ ಭಾಸ್ಕರ್ ಶೆಟ್ಟಿ ಇವರ ತೋಟದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸುಮಾರು ಹದಿನೈದು ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ಖ್ಯಾತ ಉರಗ ತಜ್ಞ ಆಗುಂಬೆಯ ಕಾಳಿಂಗ ಫೌಂಡೇಶನ್ ಇದರ ಸ್ಥಾಪಕರಾದ ಡಾ.ಪಿ ಗೌರಿಶಂಕರ್ ಮತ್ತು ಅವರ ತಂಡ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾಯಿತು.