ಶಿವಮೊಗ್ಗ: ನಗರದಲ್ಲಿ ಹಂಪ್ ಕಾಣದೆ ಗಂಭೀರವಾಗಿ ಗಾಯಗೊಂಡ ವಾಹನ ಸವಾರರು :ಎಚ್ಚೆತ್ತುಕೊಂಡ ಅಧಿಕಾರಿಗಳು
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ರಸ್ತೆಯಲ್ಲಿ ಹಾಕಲಾಗಿದೆ ಇದೇ ರೀತಿ ಗುರುವಾರ ನಗರದ ಉಷಾ ನರ್ಸಿಂಗ್ ಹೋಮ್ ಸರ್ಕಲ್ ನಿಂದ ಎಂಎಲ್ಸಿ ಡಿಎಸ್ ಅರುಣ್ ರವರ ಮನೆ ಸಮೀಪದ ವರೆಗೆ ಹಾಕಿರುವ ಹಂಪ್ ಗಳ ಮೇಲೆ ಬಿಳಿ ಬಣ್ಣ ದೊಡ್ಡ ದೊಡ್ಡ ರೀತಿಯ ಪಟ್ಟಿಗಳನ್ನ ಹಾಕದ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.ಬಳಿಕ ಸ್ಥಳೀಯರು ವಾಹನ ಸವಾರರನ ಜಾಗೃತಗೊಳಿಸುವ ಕೆಲಸವನ್ನು ಮಾಡಿದ್ರು. ಇದಾದ ಬೆನ್ನೆಲೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಶುಕ್ರವಾರ ದೊಡ್ಡ ದೊಡ್ಡ ಹಂಪ್ ಗಳ ಮೇಲೆ ಬಿಳಿ ಬಣ್ಣದ ದೊಡ್ಡ ದೊಡ್ಡ ರೀತಿಯ ಪಟ್ಟಿಗಳನ್ನ ಬಡಿಯುವ ಕೆಲಸ ಮಾಡಿದ್ದಾರೆ.