ಕನ್ನಲಿ ಈಶ್ವರ ದೇವಾಲಯದ ಬಳಿ ನಡೆದಿರುವ ಬಾಲ್ಯವಿವಾಹ ಸಂಬಂಧ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ವರ ಮೈಸೂರು ಜಿಲ್ಲೆಯ ಹನುಮನಾಳು ಗ್ರಾಮದ ಸಂಜಯ್ (23) ಹಾಗೂ ಮಂಡ್ಯ ತಾಲ್ಲೂಕಿನ ಹೆಚ್.ಕೋಡಿಹಳ್ಳಿಯ ಉಮಾ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಸೋಮವಾರ ನಗರದಲ್ಲಿ ಎಸ್ಪಿ ಕಚೇರಿ ಮಾಹಿತಿ ನೀಡಿದೆ. ಕಾರ್ಮಿಕ ನಿರೀಕ್ಷಕರಾದ ಬಿ.ಎನ್.ನಾಗರತ್ನ ಎಂಬುವವರು ಬಾಲ್ಯವಿವಾಹ ನಿಷೇಧ ಕಾಯಿದೆಯಡಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೊದಲು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬಳಿಕ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಕೃತ್ಯ ನಡೆದ ಸ್ಥಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಾಗಿದೆ. ಹಾಗಾಗಿ ಪ್ರಕರಣ ವರ್ಗಾವಣೆಗೊಂಡು ತನಿಖೆ ಮುಂದುವರಿದಿದೆ ಎಂದು ತಿಳಿಸಲಾಗಿದೆ.