ಇಳಕಲ್: ಇಳಕಲ್ಲ ಬ್ಲಾಕ್ ಪ್ರಚಾರ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಶಾಸಕ ಕಾಶಪ್ಪನವರ ಸತ್ಕಾರ
Ilkal, Bagalkot | Oct 27, 2025 ಬಾಗಲಕೋಟ ಜಿಲ್ಲೆಯ ಇಳಕಲ್ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶಂಕರ ತೋಟದ, ಸದಸ್ಯರಾಗಿ ಆಯ್ಕೆಯಾಗಿರುವ ನಾರಾಯಣ ಪೂಜಾರಿ, ಆನಂದ ಮಡಿವಾಳರ, ರಾಜು ತಿಪ್ಪಣ್ಣನವರ, ಬಸವರಾಜ ಗೋತಗಿ, ರಿಯಾಜ ಮಕಾನದಾರ, ಪ್ರವೀಣ ಹೊಳಿ, ಯಲ್ಲಪ್ಪ ರಾಜಾಪೂರ, ಬಸವರಾಜ ಅಳ್ಳೋಳ್ಳಿ, ರಫೀಕ ಮುಲ್ಲಾ ಇವರನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಅ.೨೭ ಸಾಯಂಕಾಲ ೪ ಗಂಟೆಗೆ ಸತ್ಕರಿಸಿ ಗೌರವಿಸಿದರು.