ಮಳವಳ್ಳಿ: ಪೂರಿಗಾಲಿ ಗ್ರಾ.ಪಂ ಅಧ್ಯಕ್ಷರು ಪಿಡಿಒ ಸುದ್ದಿ ಗೋಷ್ಠಿ, ಟವರ್ ನಿರ್ಮಾಣಕ್ಕೆ ಪರವಾನಿಗಿ ಪಡೆದಿಲ್ಲದ ಕಾರಣ ತೆರವು ಎಂದು ಸ್ಪಷ್ಟನೆ
ಮಳವಳ್ಳಿ : ತಾಲ್ಲೂಕಿನ ಪೂರಿ ಗಾಲಿ ಗ್ರಾಮದ ರೈತ ಮಲ್ಲಪ್ಪ ಅವರ ಜಮೀನಿನಲ್ಲಿ ಖಾಸಗಿ ಕಂಪನಿಯೊಂದು ಅಳವಡಿಸಿದ್ದ ಮೊಬೈಲ್ ಟವರ್ ನ್ನು ಗ್ರಾ ಪಂ ಅಧಿಕಾರಿಗಳು ಏಕಾಏಕಿ ತೆರವು ಮಾಡಿ ಸದರಿ ರೈತರಿಗೆ ಅಧಿಕಾರಿ ಗಳು ಅನಗತ್ಯ ಕಿರುಕುಳ ನೀಡಿ ದ್ದಾರೆ ಎಂಬ ಆರೋಪವನ್ನು ಗ್ರಾ ಪಂ ಅಧ್ಯಕ್ಷರಾದ ಹೆಚ್ ಕೆ ರೂಪ ಪಿಡಿಒ ಹೆಚ್ ಎಂ ನಂಜುಂಡ ಸ್ವಾಮಿ ತಳ್ಳಿಹಾಕಿದ್ದು ಈ ಆರೋಪ ಸತ್ಯಕ್ಕೆ ದೂರವಾದದು ಎಂದು ಸ್ಪಷ್ಟಪಡಿಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾ ಪಂ ಕಚೇರಿಯಲ್ಲಿ ಮಂಗಳ ವಾರ ಮಧ್ಯಾಹ್ನ 5.30 ರ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಸ್ಪಷ್ಟನೆ ನೀಡಿದರು.