ಶಿವಮೊಗ್ಗ: ಶಿವಮೊಗ್ಗದ ಟಿಪ್ಪು ನಗರದಲ್ಲಿ ಸಿಟಿ ಬಸ್ ಚಾಲಕ ಆತ್ಮಹತ್ಯೆ ಗೆ ಶರಣು
ಶಿವಮೊಗ್ಗದ ಟಿಪ್ಪು ನಗರದಲ್ಲಿ ಬಸ್ ಚಾಲಕನೋರ್ವ ನೇಣಿಗೆ ಶರಣಾಗಿದ್ದಾನೆ. ಬಸ್ ಚಾಲಕನ ಆತ್ಮಹತ್ಯೆಗೆ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗುತ್ತಿದೆ. ಟಿಪ್ಪುನಗರ ಎಡಭಾಗದ 5 ನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ಬಾಬು ಯಾನೆ ಸಯ್ಯದ್ ಮೆಹಬೂಬ್(36) ಎಂಬ ನಗರ ಸಿಟಿ ಬಸ್ ಚಾಲಕ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.