ಮೊಳಕಾಲ್ಮುರು: ರಾಯಾಪುರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಹಾಗೂ ಶ್ರೀಬಸವೇಶ್ವರ ಸ್ವಾಮಿ ನೂತನ ರಥೋತ್ಸವ, ಊರು ಮಾರಮ್ಮದೇವಿ ವಿಗ್ರಹ ಪ್ರತಿಷ್ಠಾನೆ
ತಾಲೂಕಿನ ರಾಯಾಪುರದಲ್ಲಿ ಸೋಮವಾರದಂದು ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ನೂತನ ರಥೋತ್ಸವ, ಶ್ರೀ ಊರು ಮಾರಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಬಸವೇಶ್ವರ ಸ್ವಾಮಿ ಕಳಸ ಪ್ರತಿಷ್ಠಾಪನೆ, ವಿಗ್ರಹಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿದ್ದಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಊರಿನ ಹಿರಿಯ ಮುಖಂಡರಾದ ಪಟೇಲ್ ಜಿ. ಪಾಪನಾಯಕ, ಕರ್ನಾಟಕ ದ್ರಾಕ್ಷ ರಸ ಮತ್ತು ವೈನ್ ಮಂಡಳಿ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್ ವೈ ಪಿ ಚೇತನ್ ಇದ್ದರು.