ಭದ್ರಾವತಿ: ಆತ್ಮಹತ್ಯೆಗೆ ಕಾರಣವಾದ ವ್ಯಕ್ತಿಗೆ 10 ವರ್ಷ ಕಠಿಣ ಜೈಲು, 1 ಲಕ್ಷ ದಂಡ ವಿಧಿಸಿದ ಭದ್ರಾವತಿ ಕೋರ್ಟ್
ಕ್ರಿಮಿನಾಶಕ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಅದಕ್ಕೆ ಕಾರಣನಾದ ವ್ಯಕ್ತಿಗೆ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ, 1,00,000 ದಂಡ ವಿಧಿಸಿದೆ. ಭದ್ರಾವತಿಯಲ್ಲಿರುವ 4ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ. ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭದ್ರಾವತಿ ತಾಲೂಕು ಅಗರದಹಳ್ಳಿ ಕ್ಯಾಂಪ್ನ ಚಂದ್ರಪ್ಪಗೆ (50) ಜೈಲು ಶಿಕ್ಷೆಯಾಗಿದೆ. ಶ್ರೀಧರ (21) 2019ರ ಜನವರಿ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಶ್ರೀಧರ್ಗೆ ಓ.ಸಿ, ಮಟ್ಕಾ ಜೂಜಾಟ ಕಲಿಸಿ, ಅದರಿಂದ ಬಂದ ಹಣವನ್ನು ನೀಡುವಂತೆ ಚಂದ್ರಪ್ಪ ಹಿಂಸೆ ನೀಡುತ್ತಿದ್ದ.