ಚಿಂತಾಮಣಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 1 ವರ್ಷದ ಮಗು ಬಿಟ್ಟು ಹೋದ ಮಹಿಳೆ, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಚಿಂತಾಮಣಿ:ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ವರ್ಷದ ಮಗುವನ್ನು ಮಹಿಳೆಯೊಬ್ಬಳು ಬಿಟ್ಟು ಹೋಗಿರುವ ಘಟನೆ ಇಂದು ಬುಧವಾರ ಮಧ್ಯಾಹ್ನದ ಒಂದುವರೆ ಗಂಟೆ ಸುಮಾರಿನಲ್ಲಿ ನಡೆದಿದೆ. ಚಿಂತಾಮಣಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಬುಧವಾರ ಮಧ್ಯಾಹ್ನದ ವೇಳೆ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಬಂದ ಮಹಿಳೆಯೊಬ್ಬಳು ಆಸ್ಪತ್ರೆ ಕೊಠಡಿಯೊಂದರ ತೊಟ್ಟಿಲಿನಲ್ಲಿ ಬಿಟ್ಟು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಕರ್ತವ್ಯದಲ್ಲಿದ್ದ ನರ್ಸುಗಳು ಒಂದು ವರ್ಷದ ಬಾಲಕನನ್ನು ಗಮನಿಸಿ ಹೆರಿಗೆ ವಾರ್ಡಿನಲ್ಲಿನ ತಾಯಂದಿರ ಗಮನಕ್ಕೆ ತಂದರೂ ಯಾವುದೇ ಸಣ್ಣ ಸುಳಿವೂ ಸಿಕ್ಕಿಲ್ಲ