ಕರ್ನಾಟಕ ಆಹಾರ ಆಯೋಗದ ಸದಸ್ಯ ಲಿಂಗರಾಜ ಕೋಟೆ ಅವರು ಜೇವರ್ಗಿಯ ಆಹಾರ ಉಗ್ರಾಣ ನಿಗಮದಲ್ಲಿರುವ ಪಡಿತರ ಆಹಾರ ಧಾನ್ಯಗಳ ಪರೀಶಿಲನೆ ಮಾಡಿದರು. ಗುರುವಾರ 4 ಗಂಟೆ ಸುಮಾರಿಗೆ ಅನೀರಿಕ್ಷಿತ ಭೇಟಿ ನೀಡಿದ ಅವರು, ಪಡಿತರ ಚೀಟಿಗೆ, ವಸತಿ ನಿಲಯಗಳಿಗೆ, ಬಿಸಿ ಊಟದ ಶಾಲೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಧಾನ್ಯಗಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೂಡ, ಸತೀಶ ಕುಮಾರ ಸಂಗನ, ಅಲ್ಪಸಂಖ್ಯಾತರ ತಾಲೂಕ ಅಧಿಕಾರಿ ಹುಲಿಕಂಠರಾಯ ಸುಂಬುಡ, ಹಿಂದುಳಿದ ವರ್ಗಗಳ ಅಧಿಕಾರಿ ಶ್ರೀಮತಿ ಬಸ್ಸಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.