*ಶೀತಗಾಳಿ:ಮುನ್ನೆಚ್ಚರಿಕೆ ಅಗತ್ಯ* ಬೆಂ ಗ್ರಾ ಜಿಲ್ಲೆ, ರಾಜ್ಯಾದ್ಯಾಂತ ಪ್ರಸ್ತುತ ಹೆಚ್ಚಾಗಿರುವ ತೀವ್ರ ಶೀತಗಾಳಿ ಹಿನ್ನೆಲೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶೀತಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳು ಮತ್ತು ಅದನ್ನು ಳನ್ನು ತಡೆಯುವ ಉದ್ದೇಶದಿಂದ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ. *ಶೀತ ಅಲೆ/ಗಾಳಿಯಿಂದ ಸುರಕ್ಷತೆ ಪಡೆಯಲು* * ದಪ್ಪನಾದ ಒಂದೇ ಬಟ್ಟೆಯ ಬದಲಿಗೆ, ಹಲವು ಪದರಗಳ ಸಡಿಲವಾದ, ಹಗುರವಾದ, ಉಣ್ಣೆಯ ಬಟ್ಟೆಗಳನ್ನು ಧರಿಸಿ.