ಬಾಗಲಕೋಟೆ: ಎಲ್ಲ ಸಕ್ಕರೆ ಕಾರ್ಖಾನೆಗಳು ಏಕರೂಪ ದರ ನೀಡಲು ಒತ್ತಾಯ,ನಗರದಲ್ಲಿ ಜಿಲ್ಲಾಡಳಿತಕ್ಕೆ ರೈತರ ಮನವಿ
ಬಾಗಲಕೋಟೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯವರು ಏಕರೂಪದರ ನೀಡಬೇಕೆಂಸು ರೈತ ಮುಖಂಡರು ಬಾಗಲಕೋಟೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.ಜಿಲ್ಲೆಯ ಮುಧೋಳ ತಾಲೂಕಿನ ಕೇವಲ ನಾಲ್ಕು ಸಕ್ಕರೆ ಕಾರ್ಕಾನೆಗಳಿಗೆ ರಿಕವರಿ ರಹಿತ ₹೩೩೦೦ ದರ ಸೀಮಿತವಾಗದೇ ,ಎಲ್ಲ ಸಕ್ಕರೆ ಕಾರ್ಖಾನೆಗಳು ಏಕರೂಪ ದರ ಘೋಷಿಸಬೇಕೆಂದು ಈ ಕುರಿತು ಕ್ರಮ ವಹಿಸಲು ರೈತ ಮುಖಂಡರು ಒತ್ತಾಯಿಸಿದ್ದಾರೆ.