ಕಲಬುರಗಿ: ಉಡಚಾನ ಶಾಂತಲಿಂಗ ಶ್ರೀಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದೇಕೆ? : ನಗರದಲ್ಲಿ ಶ್ರೀಗಳ ಸ್ಪಷ್ಟಣೆ
ಕಲಬುರಗಿಯ ಉಡಚಾಣ ಮಠದ ಶಾಂತಲಿಂಗ ಶ್ರೀಗಳು ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ನಾನು ಮದ್ಯದ ಅಮಲಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ಬಂದೂಕು ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮಠದ 10 ಎಕರೆ ಜಮೀನಿನ ನಿರ್ಜನ ಪ್ರದೇಶದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದೆ. ನನ್ನಿಂದ ಯಾವುದೇ ಅಸಭ್ಯ ಕೃತ್ಯ ನಡೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡಿರುವುದಾಗಿ ಹೇಳಿದ ಶ್ರೀಗಳು, ಮದ್ಯ ಸೇವನೆಯನ್ನು ಸಂಪೂರ್ಣ ಬಿಟ್ಟು ಈಗ ಸನ್ಮಾರ್ಗದಲ್ಲಿ ನಡೆದುಕೊಳ್ಳುತ್ತಿದ್ದೇನೆ. ನನ್ನ ವಿರುದ್ಧ ಸುಳ್ಳು ಅಪಪ್ರಚಾರ ನಡೆಯುತ್ತಿದೆ. ಮಠದ ಭಕ್ತರು ಇಂತಹ ಮಾತುಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮಠದ ಆಸ್ತಿಯನ್ನು ಕಬಳಿಸಲ