ರಾಯಚೂರು: ನಗರದ ರಂಗಮಂದಿರದಲ್ಲಿ ನ. 22 ರಂದು ಸಂಗೀತ ಉತ್ಸವ ಕಾರ್ಯಕ್ರಮ
ವನಸಿರಿ ಪಂಡಿತ್ ಅಂಬಯ್ಯ ಮೂವಿ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ರಾಯಚೂರು ಸಂಗೀತ ಉತ್ಸವ ಕಾರ್ಯಕ್ರಮವನ್ನು ನವೆಂಬರ್ 22ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ರಾಯಚೂರು ನಗರದ ಪಂಡೀತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಯಚೂರು ಸಂಗೀತ ಉತ್ಸವ ಹಬ್ಬ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚಿದಾನಂದ ನುಲಿ ಹೇಳಿದರು. ಬೆಳಿಗ್ಗೆ 9ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಅತಿಥಿಗಳು ಭಾಗವಹಿಸಲಿದ್ದಾರೆ ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಹಾರ್ಮೋನಿಯಂ, ತಬಲಸಾತಿ ಕಾರ್ಯಕ್ರಮ ನಡೆಯಲಿದೆ. ತದನಂತರ ಈ ವರ್ಷದ ನುಲಿಸಿರಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ.