ಬೀಳಗಿ: ಎಲ್ಲಾ ಕಬ್ಬು ಬೆಳೆಗಾರರಿಗೆ ಏಕರೂಪದರ ಕೊಡಿಸದಿದ್ದರೆ ಮತ್ತೆ ಹೋರಾಟ, ಪಟ್ಟಣದಲ್ಲಿ ರೈತ ಮುಖಂಡ ಶಿವನಗೌಡ ಪಾಟೀಲ್
Bilgi, Bagalkot | Nov 16, 2025 ಎಲ್ಲಾ ಕಬ್ಬು ಬೆಳೆಗಾರ ರೈತರಿಗೆ ಏಕರೂಪ ಬೆಲೆಕೊಡಬೇಕು,ಸಕ್ಕರೆ ಕಾರ್ಖಾನೆಗಳಿಂದ ಮುಚ್ಚಳಿಕೆ ಪತ್ರ ಕೊಡಿಸಬೇಕೆಂದು ರೈತ ಮುಖಂಡ ಶಿವನಗೌಡ ಪಾಟೀಲ್ ಅವರು ಸಚಿವ ಆರ್.ಬಿ.ತಿಮ್ಮಾಪೂರ್ ಅವರನ್ನ ಒತ್ತಾಯಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಮಾತನಾಡಿರುವ ಅವರು, ಸಚಿವ ತಿಮ್ಮಾಪೂರ್ ಅವರು ಕೇವಲ ಬಲಾಡ್ಯರಿಗೆ ಮಾತ್ರ ಏಕರೂಪ ದರ ಕೊಡಿಸುತ್ತಿದ್ದಾರೆ.ಬೀಳಗಿ ಭಾಗದ ರೈತರಿಗೆ ಏಕರೂಪ ದರ ಸಿಗುತ್ತಿಲ್ಲ,ಹಾಗಾಗಿ ನಾವೂ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಆದಷ್ಟು ಬೇಗ ಎಲ್ಲಾ ಕಬ್ಬು ಬೆಳೆಗಾರ ರೈತರಿಗೆ ಏಕರೂಪ ದರ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.