ಚಿತ್ರದುರ್ಗ: ಸುಲ್ತಾನಿಪುರ ಗ್ರಾಮದ ಶಾಲೆಯ ಪಕ್ಕದಲ್ಲಿ ಅಳವಡಿಸಿರುವ ಹೈ ಮಾಸ್ಕ್ ಲೈಟ್ ಕಳಚಿ ಬೀಳುವ ಸ್ಥಿತಿಯಲ್ಲಿ
ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಇಸಾಮುದ್ರ ಗ್ರಾಮ ಪಂಚಾಯತ ವ್ಯಾಪ್ತಿಯ ಸುಲ್ತಾನಿಪುರ ಗ್ರಾಮದಲ್ಲಿ ಶಾಲೆಯ ಪಕ್ಕ ಅಳವಡಿಸಿದ ಹೈಮಾಸ್ಕ್ ದೀಪ ಕಳಚಿ ಬೀಳುವಂತಾಗಿದ್ದು, ಸಾರ್ವಜನಿಕರು ಆತಂಕದಲ್ಲೇ ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಹೈ ಮಾಸ್ಕ್ ದೀಪಗಳು ಸರಿಯಾದ ನಿರ್ವಹಣೆ ಇಲ್ಲದೇ ಕಳಚಿ ಬೀಳುವಂತಾಗಿದೆ. ಇನ್ನು ದೀಪಗಳು ವಿದ್ಯುತ್ ವೈರ್ ಮಾತ್ರ ಹಿಡಿದಿದ್ದು, ಯಾವಾಗ ಕಳಚಿ ಬೀಳತ್ತೋ ಅಂತಾ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇನ್ನು ಪಕ್ಕದಲ್ಲೇ ಪ್ರಾಥಮಿಕ ಶಾಲೆ ಇದ್ದು, ಮಕ್ಕಳ ಮೇಲೆ ಲ್ಯಾಂಪ್ ಕಳಚಿ ಬೋಳತ್ತೋ ಅಂತಾ ಪಾಲಕರು ಆತಂಕಗೊಂಡಿದ್ದಾರೆ. ಕೂಡಲೇ ಹೈಮಾಸ್ಕ ಲ್ಯಾಂಪ್ ಸರಿಪಡಿಸಿಅಗ್ರಹಿಸಿದ್ದಾರೆ.