ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ರಾಣಿಬೇನ್ನೂರಿನ ಕುರಬಗೇರಿಯಲ್ಲಿ ಐತಿಹಾಸಿಕ ಶ್ರೀ ಕಾಳಿಕಾಂಬಾ ದೇವಿಯ ರಥೋತ್ಸವ ಅದ್ಧೂರಿಯಾಗಿ ನೇರವೇರಿತು. ಪ್ರತಿವರ್ಷದಂತೆ ಈ ಬಾರಿಯೂ ಅಮ್ಮನವರ ರಥೋತ್ಸವವನ್ನು ವಿಶೇಷವಾಗಿ ಹೂವು, ತರಹೆವಾರಿ ಹಣ್ಣು ಬೆಲ್ಲ, ಶಾವಿಗೆ, ತರಕಾರಿಗಳಿಂದ ರಥವನ್ನು ಅಲಕಂರಿಸಲಾಗಿತ್ತು. ಪ್ರತಿ ವರ್ಷ ರಥೋತ್ಸವ ನಡೆದುಕೊಂಡು ಬಂದಿದ್ದು, ಈ ಬಾರಿ ನೂತನ ರಥ ನಿರ್ಮಾಣ ಮಾಡಿದ್ದ ಕಮಿಟಿಯವರು ಈ ಬಾರಿ ಕಾಳಿಕಾದೇವಿ ಅಮ್ಮನವರ ರಥೋತ್ಸವವನ್ನು ಹೆಣ್ಣು ಮಕ್ಕಳಿಂದ ಎಳೆಸಿದರು. ಹೆಣ್ಣು ಮಕ್ಕಳು ಸಂಭ್ರಮದಿಂದ ರಥವನ್ನು ಎಳೆದು ಖುಷಿಪಟ್ಟರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮ ಆಚರಿಸಿದರು