ಕೆ.ಜಿ.ಎಫ್: ಬಿಜಿಎಂಎಲ್ ಕಾರ್ಮಿಕರು ನಡೆಸುತ್ತಿರುವ ಹೋರಾಟ ಸರ್ಕಾರದ ಗಮನಸೆಳೆಯಬೇಕಾಗಿದೆ: ನಗರದಲ್ಲಿ ಹೈಕೋರ್ಟ್ ವಕೀಲ ಬಾಲನ್
ಬಿಜಿಎಂಎಲ್ ಕಾರ್ಮಿಕರು 25 ವರ್ಷಗಳಿಂದ ನಡೆಸುತ್ತಿರುವ ಹೋರಾಟ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೈಕೋರ್ಟ್ ವಕೀಲ ಬಾಲನ್ ಹೇಳಿದರು. ನಗರದಲ್ಲಿ ಭಾನುವಾರ ಸಂಜೆ ಆರು ಮೂವತ್ತರ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜಿಎಂಎಲ್ ಚಿನ್ನ ತೆಗೆಯುವ ಕಾರ್ಯದಲ್ಲಿ ನಮ್ಮ ಪರಂಪರೆಯ 6000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ನಾವು ದೇಶಕ್ಕೆ ಕೊಟ್ಟಿದ್ದೇವೆ. ನಮಗೆ ಎಲ್ಲಾ ಹಕ್ಕು ಹಾಗೂ ಅರ್ಹತೆಗಳು ಇದೆ. ಸರ್ಕಾರ ಹಾಗೂ ಬಿಜೆಪಿ ನ್ಯಾಯಾಂಗ ನಿಂದನೆಯನ್ನು ಮಾಡುತ್ತಿದೆ ಈ ಸಂಬಂಧವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಬಾಲನ್ ಹೇಳಿದರು