ಮೊಳಕಾಲ್ಮುರು: ಎಸ್ಸಿ-ಎಸ್ಟಿ ಸಮಾಜಗಳಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ: ರಾಯಾಪುರ ಗ್ರಾಮದಲ್ಲಿ ವಾಲ್ಮೀಕಿ ಶ್ರೀ ಗುಡುಗು
ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ವಾಲ್ಮೀಕಿ ಶ್ರೀ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಗರಂ ಆಗಿದ್ದಾರೆ. ಸರಕಾರಗಳು ಹಿಂದುಳಿದ ಸಮುದಾಯಗಳನ್ನು ಓಟಿಗಾಗಿ ಬಳಕೆ ಮಾಡ್ತಾರೆ, ಅಧಿಕಾರ ಸಿಕ್ಕ ನಂತರ ನಮ್ಮ ನಮ್ಮ ಬಗ್ಗೆ ತಾತ್ಸಾರ ಮಾಡ್ತಾರೆ ಎಂದು ಗುಡುಗಿದ್ದಾರೆ. ಅಲ್ಲದೆ ಹಿಂದುಳಿದ ಸಮುದಾಯಗಳನ್ನು ಸರಕಾರ ನಿರ್ಲಕ್ಷ ಮಾಡ್ತಿವೆ,ಸರಕಾರಗಳು ನಮ್ಮಿಂದ ಓಟು ಪಡೆದು, ಅಧಿಕಾರಕ್ಕೆ ಬರುತ್ತವೆಅಧಿಕಾರ ಸಿಕ್ಕ ಮೇಲೆ ನಮ್ಮನ್ನೇ ತಾತ್ಸಾರ ಮಾಡ್ತಿವೆ ಯಾಕೆ ಹೀಗಾಗ್ತಿದೆ ಗೊತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಎಸ್ಸಿ, ಎಸ್ಟಿಗಳು ನಾವ್ಯಾವಾಗ ಒಂದಾಗಬೇಕು ಅನ್ನೋ ಭಾವನೆ ಬರಬೇಕು. ಸಂವಿಧಾನಿಕವಾಗಿ ಹಕ್ಕು ಪಡೆಯಲು ನಮಗೆ ಸಂವಿಧಾನ ಅವಕಾಶ ಕೊಟ್ಟಿದೆ ಅಂದರು