ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳ, ಪೊಲೀಸರ ವಶಕ್ಕೆ
ತೀರ್ಥಹಳ್ಳಿ ಪಟ್ಟಣದ ಗ್ಯಾರೆಂಜ್ ವೊಂದರಲ್ಲಿ ಕಳ್ಳತನ ಮಾಡಲು ಬಂದು ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ವರದಿ ಯಾಗಿದೆ. ಪಟ್ಟಣದ ಗ್ಯಾರೇಜಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಬಂದು ಸಾರ್ವಜನಿಕರ ಬಳಿ ಶನಿವಾರ ಸಿಕ್ಕಿಹಾಕಿಕೊಂಡಿದ್ದಾನೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಕಳ್ಳನನ್ನ ವಶಕ್ಕೆ ಪಡೆದು ಕಳ್ಳನನ್ನ ವಿಚಾರಣೆ ಗೆ ಒಳಪಡಿಸಿದ್ದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.