ಕಲಬುರಗಿ: ಟಿಪ್ಪರ್ ಡಿಕ್ಕಿ ಮಹಿಳೆಯರು ಗಂಭೀರ ಗಾಯ, ಶಾಹಾ ಜಿಲಾನಿ ಕ್ರಾಸ್ನಲ್ಲಿ ರಸ್ತೆ ಬಂದ್, 50 ಜನರ ವಿರುದ್ಧ ಕೇಸ್ ದಾಖಲು
ನಗರದ ಶಾಹಾ ಜಿಲಾನಿ ಕ್ರಾಸ್ ರಿಂಗ್ರೋಡ್ ನಲ್ಲಿ ಗುರುವಾರ ರಾತ್ರಿ ರಸ್ತೆ ಅಪಘಾತ ಸಂಭವಿಸಿದೆ. ಟಿಪ್ಪರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಾಹನಗಳಿಗೆ ಹಾಗೂ ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಕುಪಿದಗೊಂಡ ಸುಮಾರು 50 ಜನರು ಮುಖ್ಯ ರಸ್ತೆಯನ್ನು ಬಂದ್ ಮಾಡಿ ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಪೊಲೀಸರ ಮನವಿಗೂ ಕ್ಯಾರೆ ಅನ್ನದ ಜನರು ಸುಮಾರು 3 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾದ ಹಿನ್ನಲೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಶುಕ್ರವಾರ 7 ಗಂಟೆಗೆ ಪೊಲೀಸರು ತಿಳಿಸಿದ್ದಾರೆ...