ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ರಕ್ಷಾಣಾ ಕಾಯ್ಯದೆಯನ್ನು ಕಾಂಗ್ರೆಸ್ ಸರಕಾರ ದುರ್ಬಲಗೊಳಿಸಲು ಪ್ರಯತ್ನಿಸುವ ಮೂಲಕ ಗೋವು ಕಳ್ಳರ ಹಾಗೂ ಮುಸ್ಲಿಂ ಮರ ಓಲೈಕೆ ಮಾಡ್ತಿದೆ ವಿಶ್ವಹಿಂದೂ ಪರಿಷದ್ ಭಜರಂಗದಳ ಆಕ್ರೋಶ ಹೊರಹಾಕಿದೆ. ಈ ಸಂಬಂಧ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ VHP ಭಜರಂಗದಳ ದಕ್ಷಿಣ ಪ್ರಾಂಥ ಸಂಚಾಲಕ ಪ್ರಭಂಜನ್ ಚಳಿಗಾಲದ ಅಧಿವೇಶನ ವೇಳೆ ಕಾಂಗ್ರೆಸ್ ಸರಕಾರ ಗೋ ಹತ್ಯೆ ಪ್ರತಿಬಂಧಕ ಹಾಗೂ ಗೋರಕ್ಷಣಾ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿದೆ. ಗೋ ಕಳ್ಳಸಾಗಾಣಿಕೆಗೆ ವಾಹನದ ಮೊತ್ತದಷ್ಟು ಶೂರಿಟಿ ಕೊಡಬೇಕಿತ್ತು. ಆದ್ರೆ ಇಂದು ಕೇವಲ 5 ಲಕ್ಷ ರೂಪಾಯಿ ಬಾಂಡ್ ಮೇಲೆ ವಾಹನ ಬಿಡುಗಡೆಗೆ ನಿಯಮ ಸಡಿಲ ಮಾಡಿದೆ ಎಂದರು