ಚಿತ್ರದುರ್ಗ: ಭರಮಸಾಗರ ಪಿಡಿಒ ವೀರೇಶ್ ಭಾರಿ ಭ್ರಷ್ಟಾಚಾರ ಎಸಗಿದ್ದಾರೆ: ನಗರದಲ್ಲಿ ಮುಖಂಡ ಸತೀಶ್ ಆರೋಪ
ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಭರಮಸಾಗರ ಗ್ರಾಮ ಪಂಚಾಯತಿ ಪಿಡಿಓ ವೀರೇಶ್ ವಿರುದ್ದ ಭ್ರಷ್ಟಾಚಾರ ಕುರಿತು ಸುದ್ದಿಗೋಷ್ಟಿ ನಡೆಸಿದರು. ಮುಖಂಡರಾದ ಸತೀಶ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಟಿ ಮಾತ್ನಾಡಿದ ಅವರು ಭರಮಸಾಗರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರೇಶ್ ಅವರು ಪಂಚಾಯತಿ ವ್ಯಾಪ್ತಿಯಲ್ಲಿ ಬಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ 15 ನೇ ಹಣಕಾಸು, ವರ್ಗ-೧ ಯೋಜನೆ ಸೇರಿ ಹಲವು ಯೋಚನೆಯಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಎಸಗಿದ್ದಾರೆ. ಹಲವು ಬಾರಿ ತಾಲ್ಲೂಕು ಇಓ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸೋಮಶೇಖರ್ ಅವರಿಗೂ ಮನವಿ ಸಲ್ಲಿಕೆ ಮಾಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಪಿಡಿಓ ವೀರೇಶ್ ವಿರುದ್ದ ಕಠಿಣ ಕ್ರಮ ಜರುಗಸಬೇಕು ಎಂದು ಆಗ್ರಹಿಸಿದರು.