ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ, ಟ್ರಸ್ಟ್ ಕೂಡಲಸಂಗಮ ಇದರ ಅಡಿಯಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ ೨೪೭ ನೇ ಜಯಂತಿ ಹಾಗೂ ೨೦೧ ನೇ ವಿಜಯೋತ್ಸವ ಆಚರಣೆಯನ್ನು ಕೂಡಲಸಂಗಮದಲ್ಲಿ ಅ.೨೯ ರಂದು ವಿಜೃಂಭಣೆಯಿAದ ನಡೆಯಲಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಬಾಗಲಕೋಟೆ ಜಿಲ್ಲೆಯ ಇಳಕಲ್‌ದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ಮಧ್ಯಾಹ್ನ ೧ ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಇಳಕಲ್ಲ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತೌಡ ಪಾಟೀಲ (ಜಿಎಂಇ), ಮಹಾಂತೇಶ ನರಗುಂದ, ಶಿವಾನಂದ ಕಂಠಿ, ಮುತ್ತಣ್ಣ ಕಲ್ಗುಂಡಿ, ವಿಶ್ವನಾಥ ಪಾಟೀಲ ಇದ್ದರು.