ಕೆ.ಜಿ.ಎಫ್: ಪಟ್ಟಣದಲ್ಲಿ ದ್ರೌಪತಮ್ಮ ತಾಯಿಯ ಜಯಂತೋತ್ಸವ
KGF, Kolar | Aug 13, 2025 ಬೇತಮಂಗಳದಲ್ಲಿ ದ್ರೌಪತಮ್ಮ ತಾಯಿಯ ಜಯಂತೋತ್ಸವ ಅಂಗವಾಗಿ ಕರಗ ಪೂಜಾರಿ ಕಳಶ ಮಹೋತ್ಸವವನ್ನು ವಿಜುಮಣೆಯಿಂದ ಬುಧವಾರ ಸಂಜೆ 6.30ರ ಸಮಯದಲ್ಲಿ ವಿಜೃಂಭಣೆಯಿಂದ ನಡೆಸಿದರು.ಬೆಳಗ್ಗೆ ಪಂಚಾಮೃತ ಅಭಿಷೇಕ ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಇದೆ ವೇಳೆ ಕ್ಷತ್ರಿಯ ತಿಗಳ ಸಮುದಾಯದವರು ದೇವಿಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದರು.