ಚಳ್ಳಕೆರೆ: ಪಾಳು ಬಿದ್ದ ಬಸವೇಶ್ವರ ಗೊಲ್ಲರಹಟ್ಟಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ
ಚಳ್ಳಕೆರೆ:ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕವಾಗಿದ್ದು ಇದು ಕಟ್ಟು ನಿಂತು 6 ತಿಂಗಳು ಕಳೆದರೂ ದುರಸ್ತಿ ಗೊಳಿಸದೆ ಅಧಿಕು ನಿರ್ಲಕ್ಷ್ಯ ವಹಿಸಿರುವುದರಿಂದ ಕುಡಿಯುವ ನೀರಿಗಾಗಿ ದಿನನಿತ್ಯ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಹೌದು ಚಳ್ಳಕೆರೆ ತಾಲೂಕಿನ ಟಿ.ಎನ್ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜುರೆ ಗ್ರಾಮವಾದ ಬಸವೇಶ್ವರ ಗೊಲ್ಲರಹಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ. ಇರುವುದಕ್ಕೆ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ 3 ಕಿಲೋ ಮೀಟರ್ ದೂರ ಊರಿಗೆ ಹೋಗಿ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.