ಬೆಳಗಾವಿ ಚಳಿಗಾಲದ ಅಧಿವೇಶನ ಹಿನ್ನಲೆ ಇಂದು ಗುರುವಾರ 1 ಗಂಟೆಗೆ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸಿದ ಡಿ ಗ್ರೂಪ್ ಸಿಬ್ಬಂದಿಗಳು ಕಾಲೇಜುಗಳಲ್ಲಿ ಹೊರಗುತ್ತಿಗೆಯಲ್ಲಿ ಪ್ರಸ್ತುತ ಕೆಲಸ ಮಾಡುವವರಿಗೆ ಸೇವಾ ಭದ್ರತೆ ನೀಡಬೇಕು ನೌಕರರ ಕುಟುಂಬಕ್ಕೆ ಆರೋಗ್ಯ ಸುರಕ್ಷಾ ಯೋಜನೆ ಜಾರಿ ಮಾಡಬೇಕು ಖಾಯಂ ನೌಕರರಂತೆ ರಜೆ ಸೌಲಭ್ಯ ನೀಡಬೇಕು,ಕನಿಷ್ಠ ವೇತನ ನೀಡಿ ನಮ್ಮನ್ನು ಒಳಗುತ್ತಿಗೆ ಮಾಡುವಂತೆ ಆಗ್ರಹಿಸಿದರು ಇದೇ ಸಂದರ್ಭದಲ್ಲಿ ಐವತ್ತಕ್ಕಿಂತ ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿದ ಸಿಬ್ಬಂದಿಗಳು ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.