ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ, ನಗರದಲ್ಲಿ ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ ಮತ್ತು ಎಂಟರಪ್ರೈನರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ
ಬಾಗಲಕೋಟೆ ನಗರದಲ್ಲಿ ಅಪೂರ್ಣಗೊಂಡಿರುವ ರಾಯಚೂರು-ಬಾಚಿ ಹೆದ್ದಾರಿಯಿಂದ ಅಪಘಾತಗಳು ಹೆಚ್ಚಾಗುತ್ತಿದ್ದು,ಸಂಬಂಧಪಟ್ಟವರು ಸೂಕ್ತಕ್ರಮವನ್ನು ತೆಗೆದುಕೊಳ್ಳಬೇಕೆಂದು ರೈಲ್ವೆ ಮತ್ತು ಸಾಮಾಜಿಕ ಹೋರಾಟಗಾರ ಕುತುಬುದ್ದೀನ್ ಖಾಜಿ ಅವರು ಒತ್ತಾಯಿಸಿದ್ದಾರೆ.ಬಾಗಲಕೋಟೆ ನಗರದ ಬಸವೇಶ್ವ ವೃತ್ತದಲ್ಲಿ ಬಾಗಲಕೋಟೆ ಯೂನಿಯನ್ ಮರ್ಚಂಟ್ಸ ಮತ್ತು ಎಂಟರಪ್ರೈನರ್ಸ್ ಅಸೋಸೊಮಿಯೇಶನ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿ ಮಾತನಾಡಿದ್ದಾರೆ.ಅಪಘಾತಗಳನ್ನು ತಡೆಗಟ್ಟಲು ರಾಯಚೂರು -ಬಾಚಿ ಹೆದ್ದಾರಿಯನ್ನ ಪೂರ್ಣಗೊಳಿಸಬೇಕು ಹಾಗೂ ವ್ಯಾಪಾರಸ್ಥರಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.