ಕೊಪ್ಪಳ: ಕುರಿ ಕಳ್ಳತನದ ಸುಳ್ಳು ಆರೋಪ, ಮಾನವಿಯತರ ಮರೆತ ಪೊಲೀಸರು, ವ್ಯಕ್ತಿಯ ಮೇಲೆ ದೌರ್ಜನ್ಯ....!
Koppal, Koppal | Sep 29, 2025 ಕಾರಟಗಿ ಪೊಲೀಸರು ವ್ಯಕ್ತಿ ಒಬ್ಬನ ಮೇಲೆ ಸುಳ್ಳು ಕುರಿಗಳಳತನದ ಆರೋಪ ಹೊರಿಸಿ, ನಿರಂತರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಒಬ್ಬ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಬಂದ ಘಟನೆಯೊಂದು, ಕೊಪ್ಪಳ ನಗರದಲ್ಲಿ ಸೋಮವಾರ ನಡೆದಿದೆ. ಯಲಬುರ್ಗಾ ತಾಲೂಕು ಗುನ್ನಾಳ ಗ್ರಾಮದ ದುರ್ಗೇಶ್ ಎಂಬಾತನೇ ಹಲ್ಲೆಗೊಳಗಾಗಿದ್ದು ಪೊಲೀಸರು ಸುಳ್ಳು ಆರೋಪವನ್ನು ಹೊರೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.