ಕುಕನೂರ: ಜಾತಿ ಸಮೀಕ್ಷೆಗೆ ಬಂದ ಸಿಬ್ಬಂದಿಗೆ ಶಾಕ್ ನೀಡಿದ ರಾಮಣ್ಣ ಮಂಗಳೂರು...!
ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ಮಾಡಲು ಮನೆಗೆ ಬಂದವರಿಗೆ ವ್ಯಕ್ತಿಯೊಬ್ಬ ಶಾಕ್ ನೀಡಿರೋ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ. ಮಂಗಳೂರು ಗ್ರಾಮದ ನಿವಾಸಿ ರಾಮಣ್ಣ ಎಂಬುವವರು, ಸಮೀಕ್ಷೆ ನಿರಾಕರಣೆ ಮಾಡಿ ಲೆಟರ್ ಬರೆದುಕೊಟ್ಟಿದ್ದಾರೆ. 8 ಪ್ರಮುಖ ಅಂಶಗಳ ಬಗ್ಗೆ ಲೆಟರ್ ಬರೆದು ಕೊಟ್ಟು ಸಮೀಕ್ಷೆಯಿಂದ ದೂರ ಉಳಿದಿದ್ದಾರೆ.