ಚಳ್ಳಕೆರೆ: ಸಂಚಾರಿ ನಿಯಮಗಳು ಹಾಗೂ ಹೆಲ್ಮೆಟ್ ಬಗ್ಗೆ ನಾಯಕನಹಟ್ಟಿ ಪಟ್ಟಣದಲ್ಲಿ ಜಾಗೃತಿ ಮೂಡಿಸಿದ ಪಿಎಸ್ ಐ ಪಾಂಡುರಂಗಪ್ಪ
ಚಳ್ಳಕೆರೆ:-ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪಿಎಸ್ಐ ಪಾಂಡುರಂಗಪ್ಪ ವಾಹನ ಸವಾರರಿಗೆ ಸಂಚಾರಿ ನಿಯಮದ ಬಗ್ಗೆ ಪ್ರಶ್ನೆ ಕೇಳುವ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ಸರಿಯಾದ ಉತ್ತರ ನೀಡಿದಂಥ ವಾಹನ ಸವಾರರಿಗೆ ಹೆಲ್ಮೆಟ್ ಕೊಡಲಾಗುವುದು ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ವಾಹನ ಸಂಚಾರ ಮಾಡಬೇಕು ಮತ್ತು ಸಂಚಾರ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು ಹಾಗೆ ರಸ್ತೆಯಲ್ಲಿ ಪಾದಚಾರಿಗಳು ಸಂಚಾರ ಮಾಡುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಿದರು. ಜಾಗೃತಿ ಕಾರ್ಯಕ್ರಮದಲ್ಲಿ ಎಎಸ್ಐ ದಾದಾಪೀರ್, ಸಿಬ್ಬಂದಿಗಳಾದ ರಾಮಾಂಜನಿ, ಹಾಲೇಶ್, ಅಣ್ಣಪ್ಪ ನಾಯ್ಕ,ಹರೀಶ್ ರಾಜು ಇದ್ದರು.