ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇಗುಲದಲ್ಲಿ ಬುಧವಾರ ರಾತ್ರಿ ಶಿವ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಚಾಮರಾಜೇಶ್ವರನಿಗೆ ಆಗಮಿಕರಾದ ದರ್ಶನ್ ಹಾಗೂ ಅರ್ಚಕ ರಾಮಕೃಷ್ಣ ಭಾರಧ್ವಜ್, ವಿಪ್ರರಾದ ಅನಂತ ಪ್ರಸಾದ್, ಸತೀಶ್ ವಿಶೇಷ ಅಭಿಷೇಕ, ಉತ್ಸವ ಕೈಂಕರ್ಯ ನೆರವೇರಿಸಿದರು. ದೇವಸ್ಥಾನದ ಸುತ್ತಲೂ ದೀಪಗಳನ್ನು ಹಚ್ಚಲಾಗಿತ್ತು. ಬಳಿಕ ದೊಡ್ಡ ದೀಪವನ್ನು ಜಯಘೋಷಗಳ ನಡಯವೆ ಬೆಳಗಲಾಯಿತು. ಸಹಸ್ರಾರು ಮಂದಿ ಭಕ್ತರು ಶಿವ ದೀಪೋತ್ಸವದಲ್ಲಿ ಭಾಗಿಯಾದರು. ದೇವಾಸ್ಥಾನದ ಬಂಡಿಗಾರ್ ಮಹೇಶ್, ಉಪ್ಪಾರ ಮುಖಂಡ ಜಯಕುಮಾರ್ ಸೇರಿ ಇತರರು ಇದ್ದರು.