ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿಲ್ಲೂಡಿ ಗ್ರಾಮದಲ್ಲಿ ಕಳೆದ ವಾರ ಅವಷ್ಟೇ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡ ಕೆಎಫ್ ಡಿ ಸೋಂಕು ಹಿನ್ನೆಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಅದೇ ಊರಿನ ಮತ್ತಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇನ್ನು ನಾಲ್ವರಿಗೆ ಪಾಸಿಟಿವ್ ಬಂದಿದೆ, ಬೆಳ್ಳುಳ್ಳಿ ಗ್ರಾಮದಲ್ಲಿ ಪಾಸಿಟಿವ್ ಬಂದಿರುವವರಲ್ಲಿ ನಾಲ್ವರು ಮಹಿಳೆಯರು, ಓರ್ವ ಪುರುಷ ಇದ್ದು ಆರೋಗ್ಯವಾಗಿದ್ದಾರೆ ಒಟ್ಟು ಐವರಲ್ಲಿ ಸೋಂಕು ಈಗ ದೃಢಪಟ್ಟಂತಾಗಿದೆ. ಈ ಕುರಿತಾದ ಮಾಹಿತಿಯು ಶುಕ್ರವಾರ ಲಭ್ಯವಾಗಿದೆ.