ಹುಮ್ನಾಬಾದ್: ಮಾಣಿಕನಗರ ಮಾಣಿಕ್ಯ ಸೌಧದಲ್ಲಿ ಎ. ಎಫ್. ಎಸ್ ರಾಷ್ಟೀಯ ಶೈಕ್ಷಣಿಕ ಮೇಳ
Homnabad, Bidar | Nov 21, 2025 ಇಲ್ಲಿಗೆ ಸಮೀಪದ ಮಾಣಿಕ್ ನಗರದ ಮಾಣಿಕ್ಯ ಸೌಧದಲ್ಲಿ ಮಾಣಿಕ್ ಪ್ರಭು ಶಿಕ್ಷಣ ಸಮಿತಿ ವತಿಯಿಂದ ಶೈಕ್ಷಣಿಕ ಮೌಲ್ಯ ಮತ್ತು ಸಂಸ್ಕಾರ ಕುರಿತದ ರಾಷ್ಟ್ರ ಮಟ್ಟದ ಮೇಳ ಶುಕ್ರವಾರ ಬೆಳಗ್ಗೆ 11ಕ್ಕೆ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಮಿತಿಯ ಅಧ್ಯಕ್ಷ ಆನಂದರಾಜ ಪ್ರಭು ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಶಿಕ್ಷಣ ತಜ್ಞರು ಆನ್ಲೈನ್ ಮೂಲಕ ಶೈಕ್ಷಣಿಕ ಮೇಳದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ದೇಶವಿದೇಶದ 60 ಶಿಕ್ಷಣ ಸಂಸ್ಥೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮೇಳಕ್ಕೆ ಸಾಕ್ಷಿಯಾದರು.